ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜೀವನದ ಮಹಾಸಾಧನೆ



loading...
ಇಂದಿಗೊಂದು ಕೈದೀವಿಗೆ – ಆ ಅಮರಗಾಥೆ !ತ್ರಪತಿ ಶ್ರೀ ಶಿವಾಜಿ ಮಹಾರಾಜರ ಜೀವನದ ಮಹಾಸಾಧನೆಯನ್ನು ಸಾರವತ್ತಾಗಿ ಕಣ್ಣಿಗೆ ಕಟ್ಟಿಸಬಲ್ಲ ಒಂದು ಶಬ್ದ ಇದೆ:
‘ ಸ್ವರಾಜ್ಯ ಸಂಸ್ಥಾಪನೆ ! ‘ ಸ್ವರಾಜ್ಯ ಸಂಸ್ಥಾಪಕ ‘ – ಇದೇ ಶ್ರೀ ಶಿವಛತ್ರಪತಿಗೆ ಒಪ್ಪುವ ಎಲ್ಲಕ್ಕಿಂತ ಯಥಾರ್ಥವಾದ ಬಿರುದು.
ಇಲ್ಲಿ ‘ಸ್ವರಾಜ್ಯ’ ಎನ್ನುವ 20 ನೆಯ ಶತಮಾನದ ಶಬ್ದವನ್ನು 17ನೆಯ ಶತಮಾನದ ಒಬ್ಬ ರಾಜನಿಗೆ ಅನ್ವಯಿಸುವುದು ಎಷ್ಟರ ಮಟ್ಟಿಗೆ ಸರಿ ? ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುವೆನು’ ಎಂದು ಗರ್ಜಿಸಿದ ಲೋಕಮಾನ್ಯ ತಿಲಕರಿಂದಾಗಿ ಆಧುನಿಕ ಕಾಲದಲ್ಲಿ ಪ್ರಚಲಿತವಾದ ಶಬ್ದ ಅದಲ್ಲವೇ ? ಎಂದು ಯಾರಾದರೂ ಆಕ್ಷೇಪ ಎತ್ತಬಹುದು.
ಸ್ವರಾಜ್ಯ ಮಂತ್ರದ ದ್ರಷ್ಟಾರ
ಆದರೆ ವಾಸ್ತವಿಕ ಸಂಗತಿ ಎಂದರೆ ‘ಸ್ವರಾಜ್ಯ’ ಶಬ್ದವನ್ನು ಬಹುಶಃ ಮೊಟ್ಟಮೊದಲಿಗೆ ಪ್ರಯೋಗ ಮಾಡಿದವರೇ ಶಿವಾಜಿ ಮಹಾರಾಜರು.  ಅದೂ ಸಹ ತಮ್ಮ ಕೇವಲ 16 ನೆಯ ವರ್ಷದ ಎಳೆವಯಸ್ಸಿನಲ್ಲಿ.  ತಮ್ಮ ಕಿಶೋರ ಸಂಗಡಿಗ ದಾದಾಜಿ ನರಸ ಪ್ರಭುವಿಗೆ ಶಿವಛತ್ರಪತಿಯು ಬರೆದ ಪತ್ರದಲ್ಲಿ ಅದರ ಸ್ಪಷ್ಟ ಉಲ್ಲೇಖವಿದೆ.  ಆ ಚರಿತ್ರಾರ್ಹ ಪತ್ರದ, ಸಂದರ್ಭ ಹೀಗಿದೆ . ಮಾವಳ ಪ್ರಾಂತದ ಕೆಲವು ಜಹಗೀರುದಾರರು ತನಗೆ ಸಲ್ಲುತ್ತಿದ್ದ ಕಂದಾಯವನ್ನು ನಿಲ್ಲಿಸಿ,
       ‘ಬಂಡಖೋರ’  ಬಾಲಕ ಶಿವಾಜಿಗೆ ಸಲ್ಲಿಸುತ್ತಿದ್ಧಾರೆಂಬ ಸುದ್ದಿ ಕೇಳಿ ಬಿಜಾಪುರದ ಸುಲ್ತಾನ ಕೆರಳಿ ಕೆಂಡವಾದ.  ಆ ಎಲ್ಲ ಜಹಗೀರುದಾರರಿಗೆ ಅವನು ಒಂದು ಉಗ್ರ ಫರ್ಮಾನು ಹೊರಡಿಸಿದ.  ಫರ್ಮಾನು ತಲುಪಿದವರ ಪೈಕಿ ದಾದಾಜಿ ನರಸಪ್ರಭುವಿನ ತಂದೆಯೂ ಒಬ್ಬ.  ಆ ಪತ್ರವನ್ನು ದಾದಾಜಿ ಶಿವಾಜಿಗೆ ಕಳಿಸಿಕೊಟ್ಟ.  ಅದಕ್ಕೆ ಉತ್ತರವಾಗಿ ಶಿವಾಜಿ ಬರೆದ ಪತ್ರ ಅದು.  ಅದರ ಒಕ್ಕಣಿಕೆ ಹೀಗಿದೆ : ”ನಾವು ಬಂಡುಹೂಡಿದ್ದೇವೆಂಬುದು ನಿಜವಲ್ಲ.  ಶ್ರೀ ರೋಹಿರೇಶ್ವರನು ಇದುವರೆಗೂ ನಮಗೆ ಯಶಸ್ಸು ನೀಡಿದ್ದಾನೆ.  ಮುಂದಕ್ಕೂ ಹಿಂದವೀ ಸ್ವರಾಜ್ಯದ ಮನೋರಥವನ್ನು ಅವನೇ ಪೂರ್ಣಗೊಳಿಸುತ್ತಾನೆ.  ಶ್ರೀ ರೋಹಿರೇಶ್ವರನ ಸಮ್ಮುಖದಲ್ಲೇ ನಾವೆಲ್ಲರೂ ಪ್ರತಿಜ್ಞಾಬದ್ಧರಾಗಿದ್ದೇವೆ.  ಈ ರಾಜ್ಯ ನಿರ್ಮಾಣವಾಗಬೇಕೆಂದು ಭಗವಂತನ ಮನಸ್ಸಿನಲ್ಲೂ ಇಚ್ಛೆ ಇದೆ.  ತಂದೆಯವರಿಗೆ ಧೈರ್ಯ ಹೇಳುವುದು.” ಆ ಪತ್ರ ಬರೆಯುವುದಕ್ಕೂ  ಮೂರು ನಾಲ್ಕು ವರ್ಷ ಮುಂಚಿತವಾಗಿಯೇ ‘ಹಿಂದವೀ ಸ್ವರಾಜ್ಯ’ದ ಶಪಥವನ್ನು ಬಾಲಕ ಶಿವಾಜಿ ತೊಟ್ಟಿದ್ದ.
       ಅಷ್ಟು ಸಣ್ಣ ವಯಸ್ಸಿನಲ್ಲಿಯೇ ಆಂತಹ ಅಪ್ರತಿಮ ಕಲ್ಪನಾ ಸಾಮಥ್ರ್ಯ, ಧ್ಯೇಯದ ನಿರ್ಧಾರ, ಅದರ ಸಿದ್ಧಿಯಲ್ಲಿ ಸಂದೇಹಾತೀತವಾದ ನಂಬಿಕೆಗಳನ್ನೂ ತಾಳಿದ್ದ ಶಿವಾಜಿ ‘ಸ್ವರಾಜ್ಯ ಮಂತ್ರದ ದ್ರಷ್ಟಾರ ‘ಎಂದರೆ ಅದು ಅವನ ಯಥೋಚಿತ ವರ್ಣನೆಯೇ ಆದೀತು.
ದೆಹಲಿಯಲ್ಲಿ ಔರಂಗಜೇಬನಂತಹ ಮಹಾ ಕಪಟ ಹಾಗೂ ಹಿಂದು ದ್ವೇಷಿ ಬಾದಶಹನ ಮೊಗಲ ಸಾಮ್ರಾಜ್ಯ ಮತ್ತು ಬಿಜಾಪುರದಲ್ಲಿ ಆದಿಲಶಾಹಿ ರಾಜ್ಯ, ಇವು ತಮ್ಮ ಸಾಮಥ್ರ್ಯ – ಸಮೃದ್ಧಿಗಳ ನಡುಹಗಲನ್ನು ತಲುಪಿದ ಕಾಲ ಆದು.  ಭಾರಿ ಭಾರಿ ಹಿಂದು ರಾಜರು, ಸರದಾರರು ಮೊದಲ್ಗೊಂಡು ಮುಸ್ಲಿಂ ರಾಜಸತ್ತೆಯ ಕಾಲೊತ್ತುವುದರಲ್ಲಿ ಧನ್ಯತೆ ಕಾಣುತ್ತಿದ್ಧಂತಹ ವಿಷಮ ಸಮಯ.  ವಿದೇಶಿ ಆಕ್ರಮಣಕಾರರ ವಿಕ್ರಮ-ವೈಭವಗಳು ಚರಮ ಸೀಮೆಗೆ ಏರಿದ್ದಂತೆಯೇ ಈ ನಾಡಿನ ಹಿಂದು ಸಂತಾನವು ಆತ್ಮಕ್ಲೈಬ್ಯ-ಅಧೋಗತಿಗಳ ಚರಮಸೀಮೆ ಮುಟ್ಟಿದ್ದ ಕಾಲ.  ಅಂತಹ ಘೋರ ವಿಕಟ ಪರಿಸ್ಥಿತಿಯಲ್ಲಿ ಸ್ವತಂತ್ರ ಸಾರ್ವಭೌಮ ಹಿಂದವೀ ಸ್ವರಾಜ್ಯವನ್ನು ಶ್ರೀ ಶಿವಾಜಿ ಮಹಾರಾಜರು ಸ್ಥಾಪಿಸಿದರು.  ತಮ್ಮ ಬಾಲ್ಯದಲ್ಲಿ ತೊಟ್ಟ ವೀರಶಪಥವನ್ನು ನಿಜಗೊಳಿಸಿ ತೋರಿದರು.


ಇಂದಿನ ಸ್ವರಾಜ್ಯಕ್ಕೆ ದಾರಿದೀವಿಗೆಯಾಗಬಹುದೇ ?
ಇಂಥ ಲೋಕೋತ್ತರ ‘ ಸ್ವರಾಜ್ಯ ಸಂಸ್ಥಾಪಕ’ನ ಜೀವನ ಕಾರ್ಯದಿಂದ ಇಂದಿನ ನಮ್ಮ ಸ್ವರಾಜ್ಯದಲ್ಲಿನ ನಾಯಕರು, ಜನಸಾಮಾನ್ಯರು ಕಲಿಯುವ ಪಾಠಗಳೇನಾದರೂ ಇವೆಯೇ ? ಇಂದು ನಿಮ್ಮ ಸ್ವರಾಜ್ಯವನ್ನು ಮುಸುಕಿರುವ ಹಲವು ಬಗೆಯ ಸಮಸ್ಯೆ – ಸವಾಲುಗಳಿಗೆ ಆ ಮಹಾಪುರುನ ಜೇವನ ಕಾರ್ಯದ ನೆನಪು ಏನಾದರೂ ಉತ್ತರ ನೀಡಬಲ್ಲದೇ ?
       ಈ ದೃಷ್ಟಿಯಿಂದ ನಾವು ಶಿವಾಜಿ ಮಹಾರಾಜರ ಜೀವನಕಾರ್ಯವನ್ನು ಸೂಕ್ಷ್ಮವಾಗಿ ಅಭ್ಯಾಸಿಸಿದರೆ ಇಂದಿನ ನಮ್ಮ ಸಮಸ್ಯೆ – ಸವಾಲುಗಳಿಗೆ ಉತ್ತರ ನೀಡಬಲ್ಲ ಉಜ್ವಲ ಮೇಲ್ಪಂಕ್ತಿ ಅದರಲ್ಲಿ ಮೂಡಿರುವುದು ಹೆಜ್ಜೆ ಜೆಜ್ಜೆಗೂ ನಮ್ಮ ಗೋಚರಕ್ಕೆ ಬರದೆ ಇರಲಾರದು.  ಬಹುಶಃ ನಮ್ಮ ನಾಡಿನ ಇಂದಿನ ಪರಸ್ಥಿತಿಯಲ್ಲಿ ಶಿವಾಜಿ ಮಹಾರಾಜರ ಜೀವನದಷ್ಟು ಮಾರ್ಗದರ್ಶಕವಾದ, ಪ್ರೇರಣಾದಾಯಕವಾದ ಮೇಲ್ಪಂಕ್ತಿ ನಮ್ಮ ಹಿಂದಿನ ಇತಿಹಾಸದಲ್ಲಿ ಇನ್ನೊಂದು ಸಿಗಲಾರದು ಎಂದರೂ ಅದೇನೂ ಅತಿಶಯೋಕ್ತಿಯಲ್ಲ.
       ಇದಕ್ಕೆ ಕಾರಣ ಇಷ್ಟೆ.  ಶಿವಾಜಿ ಮಹಾರಾಜರು ಸ್ವರಾಜ್ಯವನ್ನು ಸ್ಥಾಪಿಸಿ, ಅದನ್ನು ಉಳಿಸಲು ಬೆಳೆಸಲು ತೋರಿದ ತತ್ವನಿಷ್ಠೆ, ಎತ್ತಿಹಿಡಿದ ಜೀವನ ಮೌಲ್ಯಗಳು, ವಹಿಸಿದ ನಿರಂತರ ಎಚ್ಚರಿಕೆ, ಸ್ಥಾಪಿಸಿದ ಆಡಳಿತದ ಸತ್ಸಂಪ್ರದಾಯಗಳು, ರಾಷ್ಟ್ರಜೀವನದ ಎಲ್ಲ ಮುಖಗಳಲ್ಲಿಯೂ ಮಾಡಿದ ಕ್ರಾಂತಿಕಾರಕ ಸುಧಾರಣೆಗಳು, ಕೊನೆಯದಾಗಿ ಇವೆಲ್ಲದರ ಸಿದ್ಧಿಗಾಗಿ ಸ್ವತಃ ಅವರು ವ್ಯಕ್ತಿಗತವಾಗಿ ಮೆರೆದ ಪ್ರಚಂಡ-ಪರಾಕ್ರಮ, ತ್ಯಾಗ, ಚಾರಿತ್ರಯ, ಕಷ್ಟ ಸಹಿಷ್ಣುತೆ, ವಿವೇಕ, ಸಮಯ ಪ್ರಜ್ಞೆ – ಇವೆಲ್ಲವೂ ಒಂದು ಕಡೆ ಕಣ್ಣಮುಂದೆ ಉಜ್ವಲವಾಗಿ ಕಂಗೊಳಿಸುವಂತೆಯೇ ಇನ್ನೊಂದು ಕಡೆ ಇಂದಿನ ಸ್ವರಾಜ್ಯದಲ್ಲಿ ಮುಸುಕಿರುವ ಇವೆಲ್ಲದರ ಸಂಪೂರ್ಣ ಅಭಾವದ ಕತ್ತಲೂ ನಮ್ಮನ್ನು ಕಾಡುತ್ತದೆ.  ಅಂತೆಯೇ ಇಂದಿನ ಕತ್ತಲನ್ನು ಹರಿಸಿ ಸ್ವರಾಜ್ಯವನ್ನು ಸರ್ವ ಮುಖಗಳಲ್ಲಿಯೂ ಬೆಳಗಿಸಬಲ್ಲ ಮೂರು ಶತಕಗಳ ಮುಂಚಿನ ಆ ಪ್ರಕಾಶಪುಂಜದ ದರ್ಶನಕ್ಕಾಗಿ ನಮ್ಮ ಹೃದಯ ಹಾತೊರಿಯುತ್ತದೆ.

ಸ್ವರಾಜ್ಯ ಮಂದಿರದ ತಳಪಾಯ
ಶಿವಾಜಿ ಮಹಾರಾಜರ ಸ್ವರಾಜ್ಯ ಸಂಸ್ಥಾಪನೆಯ ಮಹಾಕಾರ್ಯಕ್ಕೆ ಆತ್ಮದಂತಿದ್ದ ಸಂಗತಿ ಒಂದಿತ್ತು ಸ್ವರಾಜ್ಯದ ಕುರಿತಾಗಿ ಜನಸಾಮಾನ್ಯರ ಮನಸ್ಸಿನಲ್ಲಿ ಅವರು ಮೂಡಿಸಿದ ನಿತಾಂಶ ಆತ್ಮೀಯತೆ-ಶ್ರದ್ಧೆ ಅದು.  ಶಿವಾಜಿ ಮಹಾರಾಜರು ಕಟ್ಟಿದ ಧ್ಯೇಯದ ಯಶೋಮಂದಿರದ ಭದ್ರ ತಳಪಾಯವೇ ಅದು.  ಅನಕ್ಷರಸ್ಥ ಮಾವಳ ರೈತರುಗಾಣಿಗರುಕುಂಬಾರರುಕಮ್ಮಾರರಂತಹವರ ಹೃದಯದಲ್ಲಿಯೂ ಸ್ವರಾಜ್ಯಕ್ಕಾಗಿ ದುಡಿಯುವಅಗತ್ಯಬಿದ್ದಾಗ ದುಡಿಯುವದಿವ್ಯ ಪ್ರೇರಣೆಯನ್ನು ಶಿವಾಜಿ ಮಹಾರಾಜರು ಜಾಗೃತಗೊಳಿಸಿದವರೆಂದೇ ಇಡೀ ರಾಜ್ಯದ ಜನಶಕ್ತಿ ಮೈಕೊಡವಿ ಸರ್ವ ತ್ಯಾಗಕ್ಕೂ ಅಣಿಯಾಗಿ ಎದ್ದು ನಿಲ್ಲಲು ಸಾಧ್ಯವಾಯಿತು.
ಸಮಸ್ತ ಜನರಲ್ಲಿಯೂ, ತೀರ ಅನಕ್ಷರಸ್ಥ ಬಡಜನರಲ್ಲಿಯೂ ಸಹ, ಸ್ವರಾಜ್ಯದ ಕುರಿತಾಗಿ ಉತ್ಕಟವಾದ ಕಳಕಳಿ, ಭಕ್ತಿ ಚಿಮ್ಮಿಸಲು ಶಿವಾಜಿ ಮಹಾರಾಜರು ಅವಲಂಬಿಸಿದ ಸಾಧನಗಳೇನು ?
ಮೊಟ್ಟಮೊದಲನೆಯದಾಗಿ, ತಾವು ರಕ್ತ ಬಸಿದು ಕಟ್ಟಲು ಹೊರಟಿರುವ ಸ್ವರಾಜ್ಯದ ಸ್ವರೂಪವೇನು ಎಂಬುದನ್ನು ಅವರಿಗೆ ಶಿವಾಜಿ ಮಹಾರಾಜರು ಮನವರಿಕೆ ಮಾಡಿಕೊಟ್ಟರು.  ‘ಹಿಂದವೀ ಸ್ವರಾಜ್ಯ’ ಎನ್ನುವ ಆದರ್ಶವನ್ನು ಉದ್ಘೋಷಿಸಿದುದು ಮಾತ್ರವಲ್ಲ, ಆ ಸ್ವರಾಜ್ಯದ ತಿರುಳೇನು ಎಂಬುದನ್ನು ಅವರು ಪದೇ ಪದೇ ಜನಸಾಮಾನ್ಯರಿಗೆ ಮನಮುಟ್ಟುವಂತೆ  ಮಾಡಿದರು.
ಪುಣೆಯಲ್ಲಿ ತಂದೆ ಶಹಾಜಿಯ ಜಹಗೀರಿಯ ವಾರಸುದಾರನಂತೆ ಬಾಲಕ ಶಿವಾಜಿ ‘ ರಾಜ್ಯ ‘ ಆಳುತ್ತಿದ್ದಾಗಿನ ಒಂದು ಪ್ರಸಂಗ.  ಪಕ್ಕದ ರಾಂಝ್ಯ ‘ ಎನ್ನುವ ಹಳ್ಳಿಯ ಓರ್ವ ದುಷ್ಟಪಟೇಲ ಅಲ್ಲಿನ ಓರ್ವ ವಿಧವೆಯ ಶೀಲಹರಣ ಮಾಡಿದ.  ಅಂದಿನ ಸುಲ್ತಾನಿ ಕಾರುಬಾರಿನಲ್ಲಿ ಅದೊಂದು ಅಪರಾಧವೇ ಅಲ್ಲ ! ಆದರೆ ಈಗ ಶಿವಾಜಿಯ ‘ಸ್ವರಾಜ್ಯ’ ಪ್ರಾರಂಭವಾಗಿತ್ತು.  ಶಿವಾಜಿಯ  ಭಟರು ಆ ಹಳ್ಳಿಗೆ ಧಾವಿಸಿ ಆ ಉನ್ಮತ್ತ ದುಷ್ಕರ್ಮಿಯನ್ನು ಹೆಡಮುರಿಗೆ ಕಟ್ಟಿ ಪುಣೆಗೆ ಎಳೆದು ತಂದರು.  ಇನ್ನೂ ಮೀಸೆ ಬಾರದ ಎಳೆಯ ಪೋರ ಶಿವಬಾ ಸಾಂಗವಾಗಿ ಅಪರಾಧಿಯ ವಿಚಾರಣೆ ನಡೆಸಿದ.  ಅಪರಾಧ ಸಾಬೀತಾಯಿತು.  ಅಪರಾಧಿಯ ಎರಡೂ ಕೈ, ಎರಡೂ ಕಾಲು ಕತ್ತರಿಸಿಹಾಕುವಂತೆ ಶಿವಬಾನ ಬಾಯಿಂದ ಕಠೋರ ಆಜ್ಞೆ ಹೊರಬಿತ್ತು ! ಮಾತೃತ್ವ ಈ ಭೂಮಿಯ ಪವಿತ್ರ ಮಾನಬಿಂದು. ಅದರ ವಿಡಂಬನೆ ಸ್ವರಾಜ್ಯದಲ್ಲಿ ಸಹಿಸಲಾಗದು.  ಅಲ್ಲದೆ, ಸಮಾಜದ ಅತಿ ಹೀನ ದೀನ ಅಸಹಾಯಕ ಪ್ರಜೆಗೂ ರಾಜನಿಂದ ನ್ಯಾಯ ದೊರಕಬೇಕು. ಮುಸಲ್ಮಾನ ರಾಜ್ಯ ಮತ್ತು ಸ್ವರಾಜ್ಯದ ನಡುವಿನ ಅಂತರ ಅದೇ. ಜನಕ್ಕೆ ಕ್ರಮೇಣ ಸ್ವರಾಜ್ಯದ ಆದರ್ಶಗಳೇನು ಎಂಬುದು ಅರಿವಾಗತೊಡಗಿದುದು ಹೀಗೆ.
ಶಿವಾಜಿ ಮಹಾರಾಜರು ಮೊಳಗಿಸಿದ ‘ಹಿಂದವೀ ಸ್ವರಾಜ್ಯ’ ದ ಮಹನ್ಮಂಗಲ ಮಂತ್ರ ಕೇವಲ ಮಹಾರಾಷ್ಟ್ರದ್ದು ಮಾತ್ರವಲ್ಲ, ಇಡೀ ಭಾರತದ ಹೃದಯತಂತಿಯನ್ನು ಮೀಟಲು ಸಮರ್ಥವಾಯಿತು.  ದೂರದ ಬುಂದೇಲ ಖಂಡದ ರಾಜಕುಮಾರ ಛತ್ರಸಾಲನು ಮಹಾರಾಜರ ಕಾಲ ಬಳಿಗೆ ಓಡೋಡಿ ಬಂದ. ಅವರಿಂದ ಸ್ವಾತಂತ್ರ್ಯದ ದಾಹ ಕೆರಳಿತು.  ಭಾಗನಗರದ ಕುತುಬಶಾಹಿಯ ಸೂತ್ರಧಾರ ಮಾದಣ್ಣನ ಮನಸ್ಸಿನಲ್ಲಿ ಬಿಜಾಪುರದ ವಿರುದ್ಧವಾಗಿ ಶಿವಾಜಿ ಮಹಾರಾಜರಿಗೆ ನೆರವಾಗುವ ನಿರ್ಧಾರ ಮೂಡಿತು.  ವಿಧರ್ಮೀಯರ ದಾಸ್ಯ-ದೌರ್ಜನ್ಯಗಳಿಗೆ ಒಳಗಾದ ಜನಸಾಮಾನ್ಯರು ಸಹ ದೂರ ದೂರದಿಂದ ಶಿವಛತ್ರಪನ ಬಳಿಗೆ ರಕ್ಷಣೆಗಾಗಿ ಧಾವಿಸಿ ಬರತೊಡಗಿದರು.  ಗೋವೆಯಿಂದ, ಕೊಪ್ಪಳದಿಂದ ಬಂದ ಆ ರೀತಿಯ ಮೊರೆಗೆ ಓಗೊಟ್ಟು ಮಹಾರಾಜರು ಅಲ್ಲಿಗೆ ಧಾವಿಸಿದರು.  ಅವರ ಕುತ್ತನ್ನು ಪಹರಿಸಿದರು.  ಇಡೀ ಭಾರತದಲ್ಲೇ ಉದ್ದಾಮ ಧರ್ಮಪಂಡಿತನೆಂದು ಹೆಸರಾದ ಕಾಶಿಯ ಗಾಗಾ ಭಟ್ಟ ಶಿವಾಜಿ ಮಹಾರಾಜರ ಬಳಿ ಸಾರಿ ಬಂದ.  ಕಾಶಿಯ ವಿಶ್ವೇಶ್ವರ ಮಂದಿರ ಭಗ್ನಗೋಂದ್ದಕ್ಕ ಉತ್ತರ ಇಲ್ಲಿ ಸಿಕ್ಕೀತೆಂದು ಭರವಸೆ ತಾಳಿ ಬಂದಿದ್ದ.   ಮುಂದೆ ಆತನೇ ಮುಂದಾಗಿ ನಿಂತು ಶಿವಾಜಿ ಮಹಾರಾಜರಿಗೆ ವಿಧಿವತ್ತಾಗಿ ರಾಜ್ಯಾಭಿಷೇಕವನ್ನೂ ಮಾಡಿಸಿದ.
ಶಿವಾಜಿ ಮಹಾರಾಜರು ಗತಿಸಿದ 25 ವರ್ಷಗಳ ನಂತರವೂ ಆ ಪ್ರಭಾವ ಮುಂದುವರಿದಿತ್ತು.  ಪಂಜಾಬಿನ ಶ್ರೀ ಗುರುಗೋವಿಂದ ಸಿಂಹರು ಶಿವಛತ್ರಪತಿ ಕಟ್ಟ ಬೆಳೆಸಿದ್ದ ಈ ಸ್ವರಾಜ್ಯದ ಶಕ್ತಿಯೊಂದಿಗೆ ಕೈಜೋಡಿಸಲೆಂದು ದಕ್ಷಿಣಕ್ಕೆ ಇಳಿದು ಬಂದರು.
ಅಂತೆಯೇ, ಹಿಂದಿಯ ವರಕವಿ ಭೂಷಣನು ಶಿವಾಜಿ ಮಹಾರಾಜರ ಯಶೋಗೀತೆ ಹಾಡಲೆಂದೇ ದಕ್ಷಿಣಕ್ಕೆ ಕುಣಿಕುಣಿಯುತ್ತಾ ಬಂದ.  ‘ಶಿವರಾಜ ಭೂಷಣ’  ಎನ್ನುವ ಕಾವ್ಯಗಂಗೆಯನ್ನೇ ಹರಿಸಿದ.  ಇತ್ತ ದಕ್ಷಿಣದ ತಂಜಾವೂರಿನಿಂದ ಬಹುಭಾಷಾವಿಶಾರದನಾದ ಎಳೆವಯಸ್ಸಿನ ಪ್ರತಿಭಾನ್ವಿತ ಜಯರಾಮ ಕವಿಯೂ ಶಿವಾಜಿಯ ಆಸ್ಥಾನಕ್ಕೆ ಬಂದು ಶಿವಚರಿತ್ರೆಯ ಕಾವ್ಯ ಬರೆದ.
ಶಿವಾಜಿ ಮಹಾರಾಜರು ಸ್ಥಾಪಿಸಲು ಹೊರಟಿದ್ದ ‘ಸ್ವರಾಜ್ಯ’ ದಲ್ಲಿ ಕಸ್ವಕ ಅಕ್ಷರವು ಕಶಿವಾಜಿಕ ಎನ್ನುವ ವ್ಯಕ್ತಿಯನ್ನು ಸೂಚಿಸುವಂತದಲ್ಲ.  ಕಸಮಸ್ತ ಹಿಂದು ಲೋಕಕ ಎನ್ನುವ ಧ್ಯೇಯವನ್ನು ಸೂಚಿಸುವಂತಹದು, ಕಹಿಂದವೀ ಸ್ವರಾಜ್ಯಕ ಅದು, ಎನ್ನುವ ನಂಬಿಕೆ ಭಾರತದಾದ್ಯಂತ ಹಬ್ಬಿತ್ತೆಂದೇ ಇದೆಲ್ಲ ಸಾಧ್ಯವಾಯಿತು.


ಸ್ವರಾಜ್ಯದ ಶಿಸ್ತು ಎಂದರೆ……..!
ಧರ್ಮನಿಷ್ಠೆವಭಕ್ತಿಸದಾಚಾರಸುಶೀಲ ಮುಂತಾದ ಸದ್ಗುಣಗಳಿಗೆ ಮಾತ್ರವಲ್ಲ.  ಸ್ವರಾಜ್ಯಕ್ಕೆ ಪೋಷಕವೆನಿಸುವ ಪ್ರತಿಯೊಂದು ಅಂಶದ ಕಡೆಗೂ ಶಿವಾಜಿ ಮಹಾರಾಜರ ವಿಶೇಷ ಕಟಾಕ್ಷವಿತ್ತು.  ಸ್ವರಾಜ್ಯದ ಹಿತಕ್ಕಿಂತ ಮಿಗಿಲಾದ ಆಸಕ್ತಿ ಜೀವನದಲ್ಲಿ ಇನ್ನಾವುದೂ ಇರಲಾಗದೆಂಬ ಮಾತನ್ನು ಅವರು ಪದೇ ಪದೇ ಜನಮನದಲ್ಲಿ ಆಳವಾಗಿ ಅಂಕಿತಗೊಳಿಸಿದರು.
ಜನಮನದಲ್ಲಿನ ಸ್ವರಾಜ್ಯನಿಷ್ಠೆಯನ್ನು ಶಿಲಗೊಳಿಸುವಂತಹ ಯಾವುದೇ ಅನಿಷ್ಟ ಸಂಗತಿ ಕಂಡುಬಂದರೂ ಅದನ್ನು ತೊಡೆದು ಹಾಕಲು ಶಿವಾಜಿ ಮಹಾರಾಜರು ಕೃತಸಂಕಲ್ಪರಾಗಿದ್ದರು.
ಸ್ವರಾಜ್ಯಕ್ಕೆ ತಟ್ಟಬಹುದಾದ ಒಂದು ಘೋರ ಶಾಪವೆಂದರೆ ಸೃಜನ ಪಕ್ಷಪಾತ.  ಸ್ವರಾಜ್ಯದ ಆಡಳಿತದಲ್ಲಿ ಅದರ ನೆರಳು ಸಹ ಬೀಳದಂತೆ ಶಿವಾಜಿ ಮಹಾರಾಜರು ಕಟ್ಟೆಚ್ಚರವಹಿಸಿದರು.  ತಮ್ಮ ಎಂತಹ ಹತ್ತಿರದ ಆಪ್ತೇಷ್ಟರೇ ಇರಲಿ, ಸ್ವರಾಜ್ಯಕ್ಕೆ ದ್ರೋಹ ಮಾತ್ರವೂ ಸಹಿಸುತ್ತಿರಲಿಲ್ಲ.  ಸ್ವರಾಜ್ಯದ ಶಿಸ್ತು, ನಿಷ್ಠೆಗಳಲ್ಲಿ ಅಸಡ್ಡೆ ತೋರುವ ಎಂತಹ ಉನ್ನತ ಅಧಿಕಾರಗಳನ್ನೂ ಅವರು ಕ್ಷಮಿಸುತ್ತಿರಲಿಲ್ಲ.  ಒಮ್ಮೆ ಪನ್ನಾಳಗಢಕ್ಕೆ ಮಹಾರಾಜರು ಮುತ್ತಿಗೆ ಹಾಕಿದ್ದಾಗ ನಡೆದ ಪ್ರಸಂಗ.  ಸಮಯಕ್ಕೆ ಸರಿಯಾಗಿ ಸ್ವರಾಜ್ಯದ ಮಹಾದಂಡನಾಯಕ ನೇತಾಜಿ ಪಾಲ್ಕರನೇ ಬರಲಿಲ್ಲ.  ತತ್ಪರಿಣಾಮವಾಗಿ ಶಿವಾಜಿಯ ಪರಾಭವವಾಯಿತು.  ಅದಕ್ಕೆ ಶಿಕ್ಷೆ, ತಕ್ಷಣ ಮಹಾದಂಡನಾಯಕ ಸ್ಥಾನದಿಂದಲೇ ನೇತಾಜಿಗೆ ನಿವ್ಯತ್ತಿ !
ಇನ್ನೊಮ್ಮೆ ಬಸರೂರು (ಕರ್ನಾಟಕದ ಈಗಿನ ದ.ಕ. ಜಿಲ್ಲೆಯಲ್ಲಿ) ಮೇಲೆ ಮಹಾರಾಜರು ಸ್ವತ: ದಾಳಿಗೆ ಹೋದಾಗ, ಮುಂಚೆ ಗೂಢಚಾರರು ತಂದಿದ್ದ ಮಾಹಿತಿಯ ಪ್ರಕಾರ ಅಲ್ಲಿ ಧನರಾಶಿ ಸಿಗಲಿಲ್ಲ.  ಅಷ್ಟು ಭಾರಿ ಪ್ರಯಾಸ ಪಟ್ಟು ಸಹ ಅದು ಬಹುಮಟ್ಟಿಗೆ ವಿಫಲವಾಯಿತು.  ಅದಕ್ಕೆ ಕಾರಣವಾದ ಆ ಗೂಢಚಾರರಿಗೆ ಶಿವಾಜಿ ಮಹಾರಾಜರು ಮರಣದಂಡನೆಯನ್ನೇ ವಿಧಿಸಿದರು.
       ಶಿವಾಜಿ ಮಹಾರಾಜರ ಜೀವನದ ಸಂಧ್ಯಾಕಾಲದಲ್ಲಿ ಒಂದು ಸಲ ಸಾಂಭಾಜಿ ತಂದೆಯನ್ನು ಬಿಟ್ಟು ಮೊಗಲ ಪಾಳಯಕ್ಕೆ ಹೋದ.  ಮೊಗಲ ಸೇನಾಪತಿ ದಿಲೇರಖಾನನೊಂದಿಗೆ ಕೂಡಿಕೊಂಡು ಸ್ವರಾಜ್ಯದ ಕೋಟೆಗಳ ಮೇಲೆಯೇ ದಾಳಿ ಪ್ರಾರಂಭಿಸಿದ.  ಭೂಪಾಲ ಗಢಕ್ಕೆ ಅವನು ಮುತ್ತಿಗೆ ಹಾಕಿದಾಗ ಆ ಕೋಟೆಯ ಕಿಲ್ಲೆದಾರ ಫೆರಂಗೋಜಿ ನರಸಾ ಕಿಂಕರ್ತವ್ಯ ಮೂಢನಾದ.  ಸ್ವರಾಜ್ಯದ ಸಾಕ್ಷಾತ್ ಯುವರಾಜನೇ ಗಢದ ಬುಡಕ್ಕೆ ಬಂದಿರುವಾಗ ತಾನು ಅವನಿಗೆ ಗಢವನ್ನು ಒಪ್ಪಿಸುವುದು ತನ್ನ ಕರ್ತವ್ಯವೆಂದು ಬಗೆದು, ಗಢವನ್ನು ಸಾಂಭಾಜಿಗೆ ಒಪ್ಪಿಸಿ ಮಹಾರಾಜರನ್ನು ಕಾಣಲು ಬಂದ.  ಫಿರಂಗೋಜಿಯನ್ನು ಕಂಡೊಡನೆ ಮಹಾರಾಜರು ಕೆರಳಿ ಕೆಂಡವಾದರು.  “ಸ್ವರಾಜ್ಯಕ್ಕೆ ವೈರಿಯಾಗಿ ಯಾವನೇ ಬರಲಿ, ಅವನ ರುಂಡವನ್ನು ಚೆಂಡಾಡಲಿಲ್ಲವೇಕೆ ? ಸ್ವರಾಜ್ಯ ರಕ್ಷಣೆಯ ಕಾರ್ಯದಲ್ಲಿ ಮಾಯೆ, ಮೋಹಗಳಾವುವೂ ಅಡ್ಡಿ ಬರಲಾಗದು.  ನಾವು ಅದನ್ನು ಸಹಿಸುವುದಿಲ್ಲ, ಜೋಕೆ ! “
‘       ತಕ್ಷಣವೇ ಇದೇ ರೀತಿಯ ಎಚ್ದರಿಕೆಯನ್ನು ಸ್ವರಾಜ್ಯದ ಎಲ್ಲ ಕಿಲ್ಲೆದಾರರಿಗೂ ಮಹಾರಾಜರು ಕಳುಹಿಸಿಕೊಟ್ಟರು.  ಸ್ವರಾಜ್ಯದ ಸರದಾರರೆಲ್ಲರಿಗೂ ಸ್ವರಾಜ್ಯ ನಿಷ್ಠೆಯ ಹೊಸದೊಂದು ಪಾಠ ಸಿಕ್ಕಿತು.
            ಸ್ವರಾಜ್ಯಕ್ಕೆ ಶಕ್ತಿ ನೀಡುವ ಇನ್ನೊಂದು ಮುಖ್ಯ ಅಂಶ, ಗುಣವಂತರನ್ನು ಗುರುತಿಸಿ ಅವರಿಗೆ ಪ್ರಾಶಸ್ತ್ಯ ನೀಡುವುದು.  ಈ ವಿಷಯದಲ್ಲಿಯೂ ಶಿವಾಜಿ ಮಹಾರಾಜರು ಅತ್ಯಂತ ನಿರ್ದಾಕ್ಷಿಣ್ಯ ನೀತಿಯನ್ನು ತಾಳಿದ್ದರು.  ಕುಲ, ಜಾತಿ, ಮತ, ಭಾಷೆ, ಯಾವುದೇ ರೀತಿಯ ಭೇದಗಳನ್ನೂ ಅವರು ತಿಲಮಾತ್ರವೂ ಪರಿಗಣಿಸುತ್ತಿರಲಿಲ್ಲ.  ವ್ಯಕ್ತಿಯ ಕಾರ್ಯ ದಕ್ಷತೆ, ಪ್ರಾಮಾಣಿಕತೆ, ನಿಷ್ಠೆ, ಇವೇ ಅವನ ಪುರಸ್ಕಾರಕ್ಕೆ ಏಕಮಾತ್ರ ಒರೆಗಲ್ಲು.  ಗುಣ ಕಂಡ ಕಡೆ ಶಿವಾಜಿ ಮಹಾರಾಜರು ಮಾರು ಹೋಗುತ್ತಿದ್ದರು.  ಶತ್ರುವಿನ ಪಾಳಯದಿಂದಲೂ ಅಂತಹ ಎಷ್ಟೋ ನರರತ್ನಗಳನ್ನು ಅವರು ಆಯ್ದು ತಂದಿದ್ದರು. 
ಪುರಂದರಗಢದ ಹೋರಾಟದಲ್ಲಿ ದಿಲೇರಖಾನನಂತಹ ನಾಮಾಂತಿಕ ಶೂರ ಸೇನಾಪತಿಯನ್ನು ತನ್ನ ದೇದೀಪ್ಯಮಾನ ಪರಾಕ್ರಮದಿಂದ ಮಹಾರಾಜರು ತಂದ ಅಂತಹ ಒಂದು ವೀರರತ್ನ.  ಮಹಾರಾಜರಿಗೆ ಆಪ್ತ ಕಾರ್ಯದರ್ಶಿಯಾಗಿ ಪತ್ರಲೇಖನದಲ್ಲಿ ಅಸಾಮಾನ್ಯ ಪ್ರತಿಭೆ ತೋರಿದ ಬಾಳಾಜಿ ಆವಜಿ ಇನ್ನೊಬ್ಬ.  ಹೀಗೆಯೇ ಬ್ರಾಹ್ಮಣರಿಂದ ಮೊದಲುಗೊಂಡು ‘ಅಸ್ಪೃಶ್ಯರ’ ವರೆಗೆ, ಅಷ್ಟೇಕೆ ಮುಸಲ್ಮಾನರವರೆಗೆ, ಎಲ್ಲ ಜಾತಿಗಳಿಂದಲೂ ಅಸಂಖ್ಯ ಕಾರ್ಯದಕ್ಷ, ನಿಷ್ಠಾವಂತ ಜನರನ್ನು ಶಿವಾಜಿ ಮಹಾರಾಜರು ಆಡಳಿದಲ್ಲಿ ಅಳವಡಿಸಿದ್ದರು.
       ಗುಣ, ನಿಷ್ಠೆ, ಪ್ರಾಮಾಣಿಕ ಸೇವೆ ಇವಕ್ಕೇ ಅಗ್ರ ಪಟ್ಟ ಎನ್ನುವ ಈ ಕಠೋರ ನಿಯಮದಿಂದಾಗಿ ಇಡೀ ಸ್ವರಾಜ್ಯದ ಕಾರ್ಯದಕ್ಷತೆ ಅದ್ಭುತವಾಗಿ ಬೆಳೆಯಿತು, ಜನರ ಮನಸ್ಸಿನಲ್ಲಿಯೂ ಸ್ವರಾಜ್ಯದ ಆಡಳಿತಾಧಿಕಾರಿಗಳ ನಿಷ್ಪಕ್ಷಪಾತವಾದ ನ್ಯಾಯನಿಷ್ಠೆಯ ಬಗೆಗೆ ಅವಿಚಲ ಶ್ರದ್ಧೆ ಮೂಡಿತು.  ಜಾತಿ, ಮತ, ಸ್ಥಾನ, ಮಾನ, ಐಶ್ವರ್ಯ ಯಾವುದೇ ಕಾರಣಕ್ಕಾಗಿ ನ್ಯಾಯದ ಹಾದಿ ತಪ್ಪುವುದಿಲ್ಲ.  ಸರ್ವರಿಗೂ ಸಮಾನವಾದ ನ್ಯಾಯ ಸಿಗುವುದು ಖಚಿತ ಎನ್ನುವ ವಿಶ್ವಾಸ ಅವರಲ್ಲಿ  ಬೇರೂರಿತು.
ಅನ್ಯಮತೀಯರ ಬಗೆಗೆ ನೀತಿಗ ಒಂದು ಪಾಠ
ಧರ್ಮದ ಆಚರಣೆಯ ಬಗೆಗೂ ಇದೇ ನಿಷ್ಪಕ್ಷ ನ್ಯಾಯನಿಷ್ಠೆ ನೀತಿಯನ್ನು ಶಿವಾಜಿ ಮಹಾರಾಜರು ಅವಲಂಬಿಸಿದರು.  ಔರಂಗಜೇಬನ ಫರ್ಮಾನಿನಂತೆ ಇಡೀ ಹಿಂದುದೇಶದಲ್ಲಿ ದೇವಾಲಯಗಳು ಭಗ್ನಗೊಳ್ಳುತ್ತಿದ್ದ ಅತ್ಯಂತ ಪ್ರಕ್ಷೋಭಕ ಸಮಯ ಅದು.  ಕಾಶಿಯ ವಿಶ್ವೇಶ್ವರ ಮಂದಿರ ಧ್ವಂಸಗೊಂಡಿತ್ತು.  ಮಥುರೆಯ ಕೃಷ್ಣಮಂದಿರ ನೆಲಸಮವಾಗಿತ್ತು.  ಅವುಗಳ ಜಾಗದಲ್ಲಿ ಮಸೀದಿಗಳು ಎದ್ದು ನಿಂತಿದ್ದವು. ಶಿವಾಜಿಯ ಸ್ವಂತ ದೇವತೆ ತುಳಜಾ ಭವಾನಿ ನುಚ್ಚುನೂರಾಗಿದ್ದಳು.  ಹಿಂದು ಸ್ತ್ರೀಯರ ಮಾನ ವಿಧರ್ಮೀಯರಿಗೆ ವಿಲಾಸದ ವಸ್ತುವಾಗಿತ್ತು.  ಸರ್ವತ್ರ ಗೋಹತ್ಯೆ ಸಾಗಿತ್ತು.  ಇವೆರಲ್ಲದರ ನಡುವೆಯೂ ಶಿವಾಜಿ ಮಹಾರಾಜರು ಮಾತ್ರ ಎಲ್ಲ ಮತಧರ್ಮಗಳ ಬಗ್ಗೆ ಸಮಾನ ಆದರ ತೋರಿದರು.  ಯುದ್ಧಭೂಮಿಯಲ್ಲಿ ಸತ್ತ ಮುಸಲ್ಮಾನರ ಶವಗಳಿಗೆ ಅವರ ಮತಕ್ಕೆ ತಕ್ಕಂತೆ ಅಂತ್ಯಸಂಸ್ಕಾರ ಮಾಡಿಸುತ್ತಿದ್ದರು.  ಮುಸಲ್ಮಾನ ಸ್ತ್ರೀಯರು, ಕುರಾನ್ ಕೈಗೆ ಸಿಕ್ಕಿದಲ್ಲಿ ಮರ್ಯಾದೆಯಿಂದ ಮರಳಿ ಕಳಿಸಿಕೊಡುತ್ತಿದ್ದರು.  ಮುಸ್ಲಿಂ ಗೋರಿಗಳಿಗೆ, ಮಸೀದಿಗಳಿಗೆ ದತ್ತಿ ಬಿಡುತ್ತಿದ್ದರು.  ಆದರೆ ಇದಾವುದೂ ಮುಸಲ್ಮಾನರ ಭೀತಿಯಿಂದಾಗಿ ಅವರನ್ನು ಸಂತೈಸುವ ಸಲುವಾಗಿ ಅಲ್ಲ ! ಎಲ್ಲ ಮತಸ್ಥರ ಮತನಂಬಿಕೆಗಳನ್ನೂ ಗೌರವದಿಂದ ಕಾಣಬೇಕೆಂಬ ಹಿಂದು ಧರ್ಮದ ಉದಾರ ಮನೋಧರ್ಮದ ಫಲ ಅದು.
ಆದರೆ ಧರ್ಮದ ಹೆಸರಿನಲ್ಲಿ ಒತ್ತಾಯ, ವಂಚನೆಗಳನ್ನು ಮಾತ್ರ ಶಿವಾಜಿ ಮಹಾರಾಜರು ತಿಲಮಾತ್ರವೂ ಸಹಿಸುತ್ತಿರಲಿಲ್ಲ.  ಒಮ್ಮೆ ಗೋವೆಯ ಈಸಾಯಿ ಮತಾಂಧರು ಹಿಂದುಗಳನ್ನು ಬಲಾತ್ಕಾರವಾಗಿ ಮತಾಂತರಗೊಳಿಸಲು ಆರಂಭಿಸಿದರು.  ಈ ಸುದ್ದಿ ಕಿವಿಗೆ ಬಿದ್ದೊಡನೆಯೇ ಶಿವಾಜಿ ಮಹಾರಾಜರು ಅವರ ಮೇಲೆ ದಂಡೆತ್ತಿಹೋಗಿ ಆ ಕ್ರಿಸ್ತೀ ಪಾದ್ರಿಗಳಿಗೆ ನೇರವಾದ ಸವಾಲು ಹಾಕಿದರು: “ಹಿಂದುಗಳು ಕ್ರಿಸ್ತೀಮತವನ್ನು ಒಪ್ಪಿಕೊಳ್ಳಲೇಬೇಕೆಂದು ನೀವು ಹಟ ತೊಟ್ಟಿರುವಂತೆಯೇ ನಾನು ಕ್ರಿಸ್ತೀಯರೆಲ್ಲರೂ ಹಿಂದುಧರ್ಮ ಸ್ವೀಕರಿಸಬೇಕೆಂದು ಘೋಷಿಸುತ್ತೇನೆ, ಇದಕ್ಕೆ ನೀವೇನೆನ್ನುವಿರಿ ?” ಈ ಪ್ರಶ್ನೆ ಕೇಳಿ ಆ ಈಸಾಯಿ ಪಾದ್ರಿಗಳ ಬಾಯಿ ಒಣಗಿತು.  ಆ ಪ್ರಶ್ನೆಗೆ ಅವರ ಬಳಿ ಉತ್ತರ ಏನೂ ಇರಲಿಲ್ಲ.  ಹಿಂದುಗಳನ್ನು ಬಲವಂತವಾಗಿ ಕ್ರಿಸ್ತೀಯರಾಗಿ ಮಾಡಿದ ಅಪರಾಧಕ್ಕಾಗಿ ಶಿವಾಜಿ ಮಹಾರಾಜರು ಅವರಿಗೆಲ್ಲ ಮರಣಶಿಕ್ಷೆಯನ್ನು ವಿಧಿಸಿದರು.  ಗೋವೆಯ ಗವರ್ನರನಿಗೆ ಆಗ ನಿಜವಾದ ಧರ್ಮದ ಜ್ಞಾನೋದಯವಾಯಿತು ! ಕ್ರಿಸ್ತೀ ಮತಾಂತರದ ತನ್ನ ಆಜ್ಞೆಯನ್ನು ಅವನು ವಾಪಸು ಪಡೆದು ಶಿವಾಜಿ ಮಹಾರಾಜರೊಂದಿಗೆ ಒಡಂಬಡಿಕೆ ಮಾಡಿಕೊಂಡನು.

  ಸಂಕಲ್ಪ – ಸಾಧನೆ
ಶಿವಾಜಿ ಮಹಾರಾಜರ ವಯಸ್ಸು ಸುಮಾರು 15 ವರ್ಷವಿದ್ದಾಗಲೇ ಅವರು ದೇಶವನ್ನು ವಿದೇಶಿಯರ ದಾಸ್ಯದಿಂದ ಮುಕ್ತಗೊಳಿಸುವ ಸಂಕಲ್ಪ ಮಾಡಿದರು.  ಸಂಕಲ್ಪದ ಈ ಉದಾತ್ತತೆಯ ಅವರ ಜೀವನದ ಸಾಧನಿಗಳಿಗೆ ಹೆಚ್ಚು ಮೆರುಗನ್ನು ನೀಡುತ್ತದೆ.  ತನ್ನ ಸ್ವಾತಂತ್ಯಕ್ಕಾಗಿ ಯಾವುದೇ ರಾಷ್ಟ್ರದ ಸಂಘರ್ಷವು ರೋಮಾಂಚಕವಾಗಿರುವಂತೆಯೇ ಪ್ರೇರಣಾದಾಯಕವೂ ಆಗಿರುತ್ತದೆ.  ಶಿವಾಜಿಯವರ ಅಭಿಯಾನವು ಯುವ ಜನಾಂಗದ ಅಭಿಯಾನವಾಗಿತ್ತು.  ತಾರುಣ್ಯದಲ್ಲಿ ಕಲ್ಪನಾ ಶಕ್ತಿಯು ಪ್ರಖರವಾಗಿರುತ್ತದೆಮನಸ್ಸು ನಿರ್ಭಯವಾಗಿರುತ್ತದೆ.  ಉನ್ನತ ಯೋಜನೆಗಳು ಈ ವಯಸ್ಸಿನಲ್ಲೇ ರೂಪಿಸಲ್ಪಡಲು ಸಾಧ್ಯ.  ಶಂಕರಾಚಾರ್ಯರು ದಿಗ್ವಿಜಯ ಮಾಡುವ ಯೋಜನೆಯನ್ನು ತಮ್ಮ 16ನೇ ವಯಸ್ಸಿನಲ್ಲೇ ರೂಪಿಸಿದ್ದರು.  ಶಿವಾಜಿ ಮಹಾರಾಜರು ಮೊದಲನೆಯ ದುರ್ಗವನ್ನು ವಶಪಡಿಸಿಕೊಂಡಾಗ ಅವರ ವಯಸ್ಸು 19-20 ವರ್ಷ.  ಅವರು ತಮ್ಮ ಮಾತೆ ಜೀಜಾಬಾಯಿಯವರನ್ನು ಭವಾನಿಯಂತೆ ಪೂಜಿಸುತ್ತಿದ್ದರು.
ಅವರಲ್ಲಿ ಈ ಗುಣಗಳು ಸಾಕಷ್ಟು ಪ್ರಮಾಣದಲ್ಲಿ ಇದ್ದವು : (1) ಮಹಾನ್ ವೀರತೆಯ ಕಾರ್ಯಗಳು (2) ಉಚ್ಚ ನೈತಿಕತೆ ಮತ್ತು (3) ಪೂರ್ಣ ವಿಜಯ.  ಈ ಮೂರ್ರು ಗುಣಗಳು ಅವತಾರ ಪುರುಷರ ಲಕ್ಷಙಗಳೆಂದು ತಿಳಿಯಲ್ಪಡುತ್ತದೆ.  ಆದುದರಿಂದ  ಶಿವಾಜಿ ಮಹಾರಾಜರನ್ನು ಶಿವ ಅಥವಾ ವಿಷ್ಣುವಿನ ಅವತಾರವೆಂದು ತಿಳಿಯುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.
ಲೋಕಾರಾಧನೆಯ ಉಜ್ವಲರೂಪ
ಜನಸಾಮಾನ್ಯರು ಸ್ವರಾಜ್ಯದ ಅಧಿಕಾರಗಳಿಂದ ಯಾವುದೇ ಬಗೆಯ ಕಿರುಕುಳಕ್ಕೂ ಒಳಗಾಗುವಂತೆ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಮಹಾರಾಜರು ಕಾಳಜಿ ವಹಿಸುತ್ತಿದ್ದುದು ಜನಮನದಲ್ಲಿ ಸ್ವರಾಜ್ಯದ ಬಗೆಗೆ ಶ್ರದ್ಧೆ ಬೆಳೆಯಲು ಇನ್ನೊಂದು ಅತಿ ಮುಖ್ಯ ಕಾರಣ.  ಸ್ವರಾಜ್ಯ ಸಂಸ್ಥಾಪನೆಯ ಕಾರ್ಯದಲ್ಲಿ ಸೇನಾಪತಿಗಳಿಗೆ, ಸೈನಿಕರಿಗೆ ಅಗ್ರ ತಾಂಬೂಲ.  ಅದು ಸಹಜವೇ.  ಏಕೆಂದರೆ ಸ್ವರಾಜ್ಯಕ್ಕಾಗಿ ಮಿಕ್ಕೆಲ್ಲರಿಗಿಂತ ಹೆಚ್ಚಾಗಿ ತ್ಯಾಗ-ಬಲಿದಾನಗಳನ್ನು ಮಾಡುವವರು ಅವರು.  ಹೋರಾಟದ ಮೊದಲ ಪಂಕ್ತಿಯಲ್ಲಿ ನಿಲ್ಲುವವರು ಅವರು.  ಅವರಲ್ಲಿ ಯಾವುದೇ ರೀತಿಯ ಅಸಂತೋಷ ಹೊಗೆಯಾಡದಂತೆ ಮಹಾರಾಜರು ಸರ್ವಜಾಗರೂಕತೆಯನ್ನೂ ವಹಿಸುತ್ತಿದ್ದರು,  ನಿಜ.  ಆದರೆ ಆ ಸೈನಿಕಶಕ್ತಿ ಜನಪೀಡಕವಾಗದಂತೆ ಉಗ್ರತಮವಾದ ಶಿಸ್ತನ್ನೂ ಅವರು ಸೈನ್ಯದಲ್ಲಿ ಜಾರಿಗೊಳಿಸಿದ್ದರು.  ಸೇನೆಗಳು ಇಡೀ ಸ್ವರಾಜ್ಯದಲ್ಲಿ ಎಲ್ಲೇ ಸಂಚರಿಸುವಾಗಲೂ ಹಳ್ಳಿ ಕಡೆ ಬೆಳೆದು ನಿಂತ ಪೈರುಪಚ್ಚೆಗಳಿಗೆ ಕೈಹಚ್ಚಬಾರದು ; ಪೇಟೆಗಳಲ್ಲಿ ಸಾಮಾನುಗಳನ್ನು ಮಿಕ್ಕೆಲ್ಲರಂತೆಯೇ ದುಡ್ಡು ಕೊಟ್ಟು ಕೊಳ್ಳಬೇಕು ; ಸೇನೆಯ ಜನತೆಯ ಯಾವುದೇ ವರ್ಗಕ್ಕೆ ಅನ್ಯಾಯ ಎಸೆಗಿದರೂ, ಅವನಿಗೆ ಕಠೋರ ಶಿಕ್ಷೆ ಕಾದಿದ್ಧೇ.  ಸೈನಿಕರಂತೆಯೇ ಸರಕಾರದ ಯಾವನೇ ಅಧಿಕಾರಿಯಿಂದಾಗಲಿ ಅಥವಾ ಶ್ರೀಮಂತರಿಂದಾಗಲಿ ಸಾಮಾನ್ಯ ಪ್ರಜಾವರ್ಗಕ್ಕೆ ಉಪದ್ರವ ತಟ್ಟದಂತೆ ನ್ಯಾಯದಂಡ ನಿಷ್ಠುರವಾಗಿತ್ತು.  ಲಂಚ, ವಶೀಲಿ, ಸ್ತ್ರೀಲೋಲುಪತೆಗಳಂತಹ ಭ್ರಷ್ಟಾಚಾರಗಳಲ್ಲಿ ತೊಡಗಿದ ಅಧಿಕಾರಿಯ ಗತಿ ಮುಗಿದಂತೆಯೇ, ಎನ್ನುವ ಭೀತಿ ಇಡೀ ಸ್ವರಾಜ್ಯದ ಆಡಳಿತಗಾರರಲ್ಲಿ ಚೆನ್ನಾಗಿ ನಾಟಿತ್ತು.
ಈ ಎಲ್ಲ ವಿಷಯಗಳಲ್ಲಿ ಸ್ವತಃ ಶಿವಾಜಿ ಮಹಾರಾಜರ ಮೇಲ್ಪಂಕ್ತಿಯೂ ಅಷ್ಟೇ ನಿಷ್ಕಳಂಕವಾಗಿತ್ತೆಂದೇ ಅವರ ಆಜ್ಞೆಗೆ ದಂಡದ ಭಯ ಮಾತ್ರವಲ್ಲ.  ನೀತಿಯ ಬಲವೂ ಕೂಡಿತ್ತು.  ಸ್ವರಾಜ್ಯದ ಸಂಸ್ಥಾಪನೆ, ಅದರ ಸಂರಕ್ಷಣೆ, ವಿಸ್ತರಣೆ, ಇದರ ಹೊರತಾಗಿ ಅವರ ಜೀವನದಲ್ಲಿ ಇನ್ನಾವ ಆಸಕ್ತಿಯೂ ಉಳಿದಿರಲಿಲ್ಲ.  ಅದೊಂದೇ ಅವರ ಜೀವದ ಉಸಿರು.  ಪ್ರಾಣದ ಪ್ರಾಣ.  ಆಧ್ಯೇಯದ ಯಜ್ಞಪೀಠದ ಮೇಲೆ ಅವರು ತಮ್ಮ ಸರ್ವಸ್ವವನ್ನೂ ಬಲಿ ನೀಡಲು ಸದಾ ಸಿದ್ಧವಾಗಿಯೇ ಇದ್ದರು.  ಸ್ವರಾಜ್ಯ ವಿಸ್ತಾರಕ್ಕಾಗಿ ನಡೆದ ಪ್ರತಿಯೊಂದು ನಿಕರದ ಕಾಳಗದಲ್ಲಿಯೂ ತಮ್ಮ ಪ್ರಾಣವನ್ನು ಎಡಗೈಯಲ್ಲಿ ಧರಿಸಿ ಯಜ್ಞಕುಂಡದಲ್ಲಿ ಮೊದಲಿಗೆ ಧುಮುಕುತ್ತಿದ್ದವರೇ ಶಿವಾಜಿ ಮಹಾರಾಜರು.  ಅಫಜಲಖಾನನ ಭೇಟಿ ಇರಲಿ, ಶಯಿಸ್ತೇಖಾನನ  ಮೇಲಿನ ದಾಳಿ ಇರಲಿ , ಸೂರತ್ ಸೂರೆ ಇರಲಿ, ಆಗ್ರಾ ಯಾತ್ರೆ ಇರಲಿ, ರಾಜ್ಯಾಭಿಷೇಕದ ನಂತರದ ದಕ್ಷಿಣ ದಿಗ್ವಿಜಯವಿರಲಿ – ಪ್ರತಿಯೊಂದು ಪ್ರಸಂಗದಲ್ಲಿಯೂ ಅವರದೇ ಮೊದಲ ಹೆಜ್ಜೆ.  ಗಂಡಾಂತರಕ್ಕೆ ತಲೆಕೊಡುವ ಮೊದಲ ವ್ಯಕ್ತಿಯೇ ಅವರು.
ಹಾಗೆಯೇ ಮಿಕ್ಕೆಲ್ಲ ಶೀಲ-ಸದ್ಗುಣಗಳಲ್ಲಿಯೂ, ಸಚ್ಚಾರಿತ್ರ್ಯ, ವಿನಯ, ನಿಸ್ಪೃಹತೆ, ಅಧಿಕಾರಲಾಲಸೆಯ ಸೋಂಕೂ ತಾಕದಂತಹ ನಿರ್ಲಿಪ್ತವೃತ್ತಿ, ವಭಕ್ತಿ, ಸಂಯಮ, ಮಾತೃಭಕ್ತಿ, ಪಿತೃಭಕ್ತಿ, ಗುರುಭಕ್ತಿ ಗ ಇವೆಲ್ಲವೂ ಎರಕಗೊಂಡ ರೂಪ – ಶಿವಾಜಿ ಮಹಾರಾಜರು_
ಸ್ವತಃ ಗುರು ಸಮರ್ಥ ರಾಮದಾಸರೇ ಶಿವಾಜಿಯ ಬಗ್ಗೆ ಗ
“ ಆಚಾರಶೀಲ ವಿಚಾರಶೀಲ ನ್ಯಾಯಶೀಲ ಧರ್ಮಶೀಲ ಸರ್ವಜ್ಞ – ಸುಶೀಲ ಜಾಣತಾ ರಾಜಾ ?? “
”ಯಶವಂತ ಕೀರ್ತಿವಂತ ವರದವಂತ ಸಾಮಥ್ರ್ಯವಂತ ಪುಣ್ಯವಂತ ನೀತಿವಂತ ಜಾಣತಾ ರಾಜಾ ?? “
ಎಂದು ಹೊಗಳಿ ಹಾಡಿದರಿಂದ ಮೇಲೆ ಶಿವಾಜಿ ಮಹಾರಾಜರ ನೀತಿ-ತೇಜಸ್ಸನ್ನು ಇನ್ನು ವರ್ಣಿಸಲು ಏನು ಉಳಿದಿದೆ?
ಕ್ರಾಂತಿಕಾರಕ ಸುಧಾರಣೆಗಳು ಯಶಸ್ಸಿನ ರಹಸ್ಯ
ಶಿವಾಜಿ ಮಹಾರಾಜರ ವ್ಯಕ್ತಿತ್ವವು ಇಂತಹ ಅಪ್ರತಿಮ ನೀತಿತೇಜಸ್ಸಿನಿಂದ ಬೆಳಗುತ್ತಿತ್ತೆಂದೇ ಅವರು ಸ್ವರಾಜ್ಯವನ್ನು ಭದ್ರಗೊಳಿಸುವ ಅನೇಕ ಕ್ರಾಂತಿಕಾರಕ ಸುಧಾರಣೆಗಳನ್ನು ಜಾರಿಗೆ ತರಲು ಸಾಧ್ಯವಾಯಿತು.  ಶತಶತಮಾನಗಳಿಂದ ಬಲವಾಗಿ ಬೇರು ಬಿಟ್ಟಿದ್ದ ಹಲವಾರು ಸ್ವಹಿತಾಸಕ್ತಿಗಳುಕುರುಡು ರೂಢಿಗಳ ಮೇಲೆ ಅವರು ವಜ್ರಪ್ರಹಾರ ಮಾಡಲು ಮುಂದಾದರು.  ಸೈನಿಕ ಸರದಾರರ ಸಾಹಸ ಕಾರ್ಯಗಳಿಗೆ ಮೆಚ್ಚುಗೆಯಾಗಿ ಆಗಿನ ಕಾಲದಲ್ಲಿ ಕಜಹಗೀರುಕ ಗಳನ್ನು ಕೊಡುವ ಪದ್ಧತಿ ಸರ್ವೇಸಾಮಾನ್ಯವಾಗಿತ್ತು.  ಅಂತಹ ಜಹಗೀರುಗಳ ಒಡೆಯರಿಲ್ಲರೂ ಪಾಳೆಯಗಾರರಂತೆ ಸ್ವಂತ ಸೈನ್ಯವಿಟ್ಟುಕೊಂಡು ಕರೆ ಬಂದಾಗ ಮಾತ್ರ ರಾಜ್ಯದ ಸೇವೆಗೆ ಹಾಜರಾಗುತ್ತಿದ್ದರು.  ‘ ಸ್ವರಾಜ್ಯದೊಳಗೆ ಹಲವಾರು ರಾಜ್ಯ ಗಳಿರುವಂತಹ ಈ ಪರಿಸ್ಥಿತಿಯ ಅಪಾಯವನ್ನು ಶಿವಾಜಿ ಮಹಾರಾಜರು ಕೊನೆಗಾಣಿಸಿದರು.  ಜಹಗೀರುಗಳನ್ನು ಕೊಡುವ ಪದ್ಧತಿಯನ್ನು ನಿಲ್ಲಿಸಿದರು.  ಸ್ವರಾಜ್ಯದ ಹೊರತಾಗಿ ಇತರರು ಸೇನೆಗಳನ್ನು ಇಟ್ಟುಕೊಳ್ಳುವುದನ್ಣೂ ನಿಷೇಧಿಸಿದರು.  ಹೊಸದಾಗಿ ತಮ್ಮ ಬೀಗನಾದ ಶಿರ್ಕೆಯು ಮದುವೆ ಬಳುವಳಿಯಾಗಿ ಜಹಗೀರು ಕೇಳಿದಾಗಲೂ ಮಹಾರಾಜರು ಕೌಶಲ್ಯದಿಂದ ಆ ಸಲಹೆಯನ್ನು ನಿವಾರಿಸಿದರು.  ಹೆಚ್ಚುವರಿ ಜಮೀನನ್ನೆಲ್ಲ ಸಾಮಾನ್ಯ ಬಡ ರೈತರಿಗೆ ಹಂಚಿಬಿಟ್ಟರು.  ಇದರಿಂದ ಇಡೀ ರೈತಸಮುದಾಯದಲ್ಲಿ ಸ್ವರಾಜ್ಯದ ಬಗ್ಗೆ ನೇರವಾದ ನಿಷ್ಠೆಸ್ವರಾಜ್ಯದ ಸಂರಕ್ಷಣೆಯಲ್ಲಿ ತಮ್ಮ ಹಿತವೂ ಇದೆ ಎನ್ನುವ ಅವಿಚಲ ನಂಬಿಕೆ ನೆಲೆಗೊಂಡಿತು.
ಇನ್ನು ಧಾರ್ಮಿಕ ಕ್ಷೇತ್ರದಲ್ಲಿಯೂ ಅವರು ಹಳೆಯ ಆತ್ಮಾತುಕ ರೂಢಿಗಳನ್ನು ನಿರ್ಭಯವಾಗಿ ಮೂಲೆಗೊತ್ತಿದ್ದರು.  ಸ್ವತಃ ತಾವೇ ಹಡಗು ಹತ್ತಿ ಸಮುದ್ರಪ್ರಯಾಣ ಮಾಡಿ ಸಮುದ್ರ ದುರ್ಗಗಳನ್ನು ಕಟ್ಟಲು ಆಜ್ಞಾಪಿಸಿದರು.  ಸಮುದ್ರಯಾತ್ರೆ ಧರ್ಮಕ್ಕೆ ಸಮ್ಮತವಲ್ಲ ಎಂಬ ಭ್ರಮೆಯನ್ನು ತೊಡೆದು ಹಾಕಿದರು.  ಸಾಗರಪರಾಕ್ರಮದ ಹೊಸ ಉಜ್ವಲ ಪರಂಪರೆಯನ್ನು ಪ್ರಾರಂಭಿಸಿದರು.  ಜುಲುಮೆಗವಂಚನೆಗಳಿಂದ ಅಹಿಂದು ಮತಗಳಿಗೆ ಬಲಿಯಾದವರನ್ನು ಶುದ್ಧಿಮಾಡಿ ಮರಳಿ ಹಿಂದುಧರ್ಮಕ್ಕೆ ಬರಮಾಡಿಕೊಳ್ಳುವ ಹೊಸ ಕ್ರಾಂತಿಕಾರಿ ಕ್ರಮವನ್ನೂ ಅವರು ಪ್ರಾರಂಭಿಸಿದರು.  ಬಿಜಾಪುರದ ಬಾದಶಹನು ಮತಾಂತರಿಸಿದ್ದ ಬಜಾಜಿ ನಿಂಬಾಳ್ಕರ್, ಔರಂಗಜೇಬನು ಮತಾಂತರಗೊಳಿಸಿದ್ದ ನೇತಾಜಿ ಪಾಲ್ಕರ್  ಇಬ್ಬರನ್ನೂ ಸ್ವತಃ ಮಹಾರಾಜರೇ ತಮ್ಮ ಸಮ್ಮುಖದಲ್ಲೇ ಶುದ್ಧಿಮಾಡಿ ಹಿಂದುಧರ್ಮಕ್ಕೆ ಬರಮಾಡಿಕೊಂಡರು.  ಬಜಾಜಿಗೆ ತಮ್ಮ ಸ್ವಂತ ಮಗಳನ್ನು ಧಾರೆ ಎರೆದುಕೊಟ್ಟರು.  ನೇತಾಜಿಗೂ ತಮ್ಮ ಪರಿವಾರದಿಂದಲೇ ಹುಡುಗಿಯೊಬ್ಬಳನ್ನು ಮದುವೆ ಮಾಡಿಸಿಕೊಟ್ಟರು.  ಈ ಮೂಲಕ ಸಮಾಜದಲ್ಲಿ ಮತ್ತೆ ಅವರಿಬ್ಬರಿಗೂ ಮುಂಚಿನ ಗಣ್ಯಸ್ಥಾನವನ್ನು ಕಲ್ಪಿಸಿಕೊಟ್ಟರು.
ಒಂದು ಪರಮಾಶ್ಚರ್ಯದ ಸಂಗತಿ ಎಂದರೆ ಶಿವಾಜಿ ಮಹಾರಾಜರ ಈ ಯಾವ ಕ್ರಮಗಳಿಗೂ ಕಧರ್ಮ ಪಂಡಿತರುಕ ವಿರೋಧದ ಚಕಾರವನ್ನೂ ಎತ್ತಲಿಲ್ಲ.  ಬದಲಾಗಿ, ಆ ಎಲ್ಲ ಕ್ರಮಗಳನ್ನೂ ವಿಧಿವತ್ತಾಗಿ, ಧರ್ಮದ ರೀತಿಯಲ್ಲಿಯೇ ಸಾಂಗಗೊಳಿಸಲು ಅವರು ಮುಂದೆ ಬಂದರು ! ಪಾಳೆಯಗಾರಿಕೆಯನ್ನು ರದ್ದುಮಾಡಿದಾಗಲೂ ಅಷ್ಟೆ, ಮಹಾರಾಜರ ವಿರುದ್ಧವಾಗಿ ಬಂಡಾಯವೇಳುವ ದುಸ್ಸಾಹಸಕ್ಕೆ ಯಾರೂ ಎಳಸಲಿಲ್ಲ.
ಸ್ವರಾಜ್ಯಸ್ಥಾಪನೆಗೆ ಶಿವಾಜಿ ಮಹಾರಾಜರು ಹೊಸದಾಗಿ ರೂಪಿಸಿದ ವೃಕ (ಗೆರಿಲ್ಲಾ) ಯುದ್ಧದ ವಿಧಾನಕ್ಕೆ ಅನಿವಾರ್ಯವಾದ ಸಂಗತಿ ಎಂದರೆ, ಸಾಮಾನ್ಯ ಜನತೆಯ ನಿಶಾಂತ ಏಕನಿಷ್ಠ ಬೆಂಬಲ.  ಶಿವಾಜಿ ಮಹಾರಾಜರು ಅಂತಹ ಜನನಿಷ್ಠೆ ಗಳಿಸಿದ್ದರೆಂದೇ ಅಷ್ಟು ರ್ದೀಕಾಲ ಆ ಯುದ್ಧ ವಿಧಾನವನ್ನು ಯಶಃಪ್ರದವಾಗಿ ಮುಂದುವರಿಸಲು ಸಾಧ್ಯವಾಯಿತು.  ಮುಂದೆ ಶಿವಾಜಿ ಮಹಾರಾಜರು ಕಾಲವಾದ ಮೇಲೆ ಸ್ವತಃ ಔರಂಗಜೇಬನು  ನಾಲ್ಕು ಲಕ್ಷ ಸೇನೆಯೊಡನೆ ಇಳಿದುಬಂದು ಸ್ವರಾಜ್ಯದ ಜ್ಯೋತಿಯನ್ನು ಅಳಿಸಿಹಾಕಲು ವರ್ಷಾನುವರ್ಷ ಸೆಣಸಿದ.  ಆದರೂ ಕೊನೆಗೆ ಅವನು ಕೈಸೋತು ನಿರಾಶನಾಗಿ ದಕ್ಷಿಣದಲ್ಲಿಯೇ ತನ್ನ ಗೋರಿಯನ್ನು ಕಂಡ.  ಶಿವಾಜಿ ಮಹಾರಾಜರು ಜನಮನದಲ್ಲಿ ಪ್ರಜ್ವಲಿಸಿದ್ದ ಸ್ವರಾಜ್ಯನಿಷ್ಠೆಯ ಮಂತ್ರವೇ ಈ ಪವಾಡವನ್ನು ಸಾಧಿಸಿದುದೆಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವೆಲ್ಲಿದೆ ?
ಸ್ವರಾಜ್ಯ ಮಂದಿರಕ್ಕೆ ಪ್ರಾಣಪ್ರತಿಷ್ಠೆ
ಸ್ವರಾಜ್ಯವು ತಮ್ಮೆಲ್ಲರ ಹೃದಯಕ್ಕೂ ಅತ್ಯಂತ ಪ್ರಿಯವಾದ ಪೂಜ್ಯವಾದ ವಿಷಯ, ಸ್ವರಾಜ್ಯದ ಮೇಲ್ಮೆಯಲ್ಲಿಯೇ ತಮ್ಮ ಏಳಿಗೆಯೂ ಇದೆ, ಎನ್ನುವ ಆಳವಾದ ಅರಿವು ; ಶಿವಾಜಿ ಮಹಾರಾಜರ ರೂಪದಲ್ಲಿ ಕಾಣುತ್ತಿದ್ದ ಸ್ವರಾಜ್ಯನಿಷ್ಠೆಯ ಧಗಧಗಿಸುವ ಆದರ್ಶ – ಇವೇ ಸ್ವರಾಜ್ಯಕ್ಕಾಗಿ ಜನರು ಯಾವುದೇ ಕಷ್ಟ-ಸಂಕಟಗಳನ್ನು ನಗುಮೊಗದಿಂದ ಎದುರಿಸುವಂತೆ ಮಾಡಿದ ರಹಸ್ಯ.  ಜನಮನದಲ್ಲಿ ಬಿತ್ತಿದ್ದ ಇಂತಹ ಅದ್ವಿತೀಯ ನಿಷ್ಠೆಯ ಬೀಜವೇ ಮುಂದೆ ಮೊಳಕೆಯೊಡೆದು ಬೆಳೆದು ಅಮೃತಫಲ ನೀಡಿತು.  ಇ. 1674 ರ ಶ್ರೀ ಆನಂದನಾಮ ಸಂವತ್ಸರದ ಜ್ಯೇಷ್ಠ ಶುದ್ಧ ತ್ರಯೋದಶಿಯಂದು ರಾಯಗಢದಲ್ಲಿ ಕಹಿಂದವೀ  ಸ್ವರಾಜ್ಯಕ ದ ಸ್ಥಾಪನೆಯ ಅಧಿಕೃತ ಘೋಷಣೆಯಾಯಿತು.  ಸ್ವರಾಜ್ಯದ ಸ್ವತಂತ್ರ ಸುವರ್ಣ ಸಿಂಹಾಸನ ಅಂದು ಸಂಸ್ಥಾಪನೆಯಾಯಿತು.  ಅಖಿಲ ಹಿಂದುಜಗತ್ತಿಗೆ ಹೊಸದೊಂದು ಸ್ಫೂರ್ತಿಕೇಂದ್ರ ಅಂದು ಮೈತಾಳಿತು.  ಅಂದು ಸಕಲ ವೈಭವಗಳೊಂದಿಗೆ ಶಿವಾಜಿ ಮಹಾರಾಜರು ವಿಧಿವತ್ತಾಗಿ ಛತ್ರಪತಿ ಆದರು.  ಆ ಮುಹೂರ್ತ ಒದಗಿಬಾರದಂತೆ ಮಾಡಲು ವಿಶ್ವ ಪ್ರಯತ್ನ ಪಟ್ಟಂತಹ ವೈರಿ ರಾಜರೂ ಅಂದು ಈ ನೂತನ ಹಿಂದುಛತ್ರಪತಿಗೆ, ಹಿಂದವೀ ಸ್ವರಾಜ್ಯ ಸಂಸ್ಥಾಪಕನಿಗೆ, ತಮ್ಮ ಉಡುಗೊರೆ ಒಪ್ಪಿಸಲು ಮುಂದಾದರು !
ಖ ಪ್ರಯಾಗದ ಅಕ್ಷಯ ವಟವೃಕ್ಷವನ್ನು ಎಷ್ಟೇ ಬಾರಿ ಕಡಿಸಿ, ಕಾದ ಸೀಸೆ ಸುರಿಸಿ ನಾಶಗೊಳಿಸಲು ಮೊಗಲ ಬಾದಶಹ ಜಹಂಗೀರನು ಯತ್ನಿಸಿದರೂ ಅದು ಮತ್ತೆ ಮತ್ತೆ ತಲಿಎತ್ತೆ ನಿಂತಿರುವಂತೆಯೇ ಹಿಂದುತ್ವದ ವಟವೃಕ್ಷವೂ ಅಕ್ಷಯವಾದುದು, ಅಮರವಾದುದು, ಎಂಬುದನ್ನು ಸಿದ್ಧಪಡಿಸಿದುದೇ ಶಿವಾಜಿಯ ಜೀವನದ ಮಹಾಸಾಧನೆ ಖ ಎಂದು ಹೋಳಿದ ಪ್ರಸಿದ್ಧ ಇತಿಹಾಸಕಾರ ಶ್ರೀ ಜದುನಾಥ ಸರಕಾರರ ಸಾರಗರ್ಭಿತವಾದ ವರ್ಣನೆಗಿಂತ ಸುಂದರವಾಗಿ ಶಿವಛತ್ರಪತಿಯ ಜೀವನಕಾರ್ಯದ ಬಗ್ಗೆ ಯಾರು ತಾನೆ ಹೇಳಬಲ್ಲರು ?
ಶಿವಛತ್ರಪತಿಯ ಸ್ವರಾಜ್ಯ ಸಂಸ್ಥಾಪನೆಯ ಕಾರ್ಯದ ಮೇಲೆ ಈ ರೀತಿ ನಾವು ದೃಷ್ಟಿ ಹಾಯಿಸುತ್ತಾ ಹೋದಂತೆಲ್ಲ ನಮ್ಮ ಇಂದಿನ ಸ್ವರಾಜ್ಯದ ತದ್ವಿಪರೀತ ಸ್ಥಿತಿಯೂ ಜೊತೆ ಜೊತೆಗೇ ಹೃದಯವನ್ನು ಇರಿಯುತ್ತಾ ಹೋಗುವುದು ಸ್ವಾಭಾವಿಕ. ಈ ನಾಡಿನ ಉದಾತ್ತ ಜೀವನಾದರ್ಶಗಳ ಸ್ಪರ್ಶವೇ ಇಲ್ಲದ, ‘ಹಿಂದವೀ’ ಎನ್ನುವ ಆತ್ಮಪ್ರಕಾಶ ಮಿಂದ, ಕೇವಲ ಆಕ ಘೋಷಣೆಗಳ ನಿಸ್ತೇಜ-ನಿಸ್ಸಾರವಾದ ಸ್ವರಾಜ್ಯದ ಕಲ್ಪನೆ ; ನಾಯಕವರ್ಗವು ಹೆಜ್ಜೆಹೆಜ್ಜೆಗೂ ಸ್ವರಾಜ್ಯದ ಹಿತವನ್ನು ಜಾತಿ, ಮತ, ಪ್ರಾಂತ ಪಕ್ಷಗಳ ಹಿತಕ್ಕಾಗಿ ಬಲಿಕೊಡುವ ದೃಶ್ಯ ; ಸ್ವಂತದ ಸ್ವಾರ್ಥಕ್ಕಾಗಿ ಸ್ವರಾಜ್ಯಕ್ಕೆ ಎರಡು ಬಗೆಯಲೂ ಸಿದ್ಧವಾಗುವಂತಹ ಪ್ರವೃತ್ತಿ ; ಶೀಲ-ಸದ್ಗುಣ-ವಭಕ್ತಿ-ಧರ್ಮನಿಷ್ಠೆಗಳ ಪೂರ್ತಿ ಅಭಾವ ; ಜಾತಿ-ಮತ-ಪಕ್ಷ-ಹಣಗಳಿಗೆ ಪುರಸ್ಕಾರ, ಕಾರ್ಯದಕ್ಷತೆ- ಪ್ರಾಮಾಣಿಕತೆ- ಚಾರಿತ್ರ್ಯ-ಸದ್ಗುಣಗಳಿಗೆ ವನವಾಸ ; ಲಂಚರುಷುವತ್ತು, ನಾನಾವಿಧ ಭ್ರಷ್ಟಾಚಾರ ಅನಾಚಾರಗಳಲ್ಲಿ ತೊಡಗುವ ಸರಕಾರಿ ಮಂತ್ರಿಗಳು ಗ ಅಧಿಕಾರಿಗಳು ಗ ಅಥವಾ ಸಮಾಜದಲ್ಲಿನ ಪ್ರಭಾವಶಾಲಿ ವ್ಯಕ್ತಿಗಳಿಗೆ ಶಿಕ್ಷೆಯ ಅಂಜಿಕೆ ಎಳ್ಳಷ್ಟೂ ಇಲ್ಲದಿರುವುದು ; ಜನಸಾಮಾನ್ಯರಿಗೆ ನ್ಯಾಯದ ಭರವಸೆ ಸುತರಾಂ ಉಳಿದಿಲ್ಲದಿರುವುದು ; ತಮ್ಮ ಅಳಲಿನ ಕೂಗು ಕೇಳಿದಷ್ಟು ಸರಕಾರದ ಕಿವಿ ಕಿವುಡಾಗಿದೆ,  ನಾಯಕರು ಅಧಿಕಾರಮತ್ತರಾಗಿದ್ದಾರೆ, ಎನ್ನುವ ಮನೋಭಾವ ಜನರಲ್ಲಿ ಮನೆಮಾಡಿರುವುದು ; ಸ್ವರಾಜ್ಯ ಬಂದನಂತರ ತಮ್ಮ ಬವಣೆಗಳು ದಿನದಿನಕ್ಕೆ ಹೆಚ್ಚುತ್ತಲೇ ಹೋಗಿ ಸ್ವರಾಜ್ಯಕ್ಕಿಂತ ಹಿಂದಿನ ಬ್ರಿಟೀಷರ ಪರರಾಜ್ಯವೇ ಎಷ್ಟೋ ಮೇಲಾಗಿತ್ತು ಎನ್ನುವವರೆಗೆ ಜನಸಾಮಾನ್ಯರು ಸ್ವರಾಜ್ಯದ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿರುವುದು ; ತಮ್ಮ ಸ್ಥಿತಿ ಒಂದು ಕಡೆ ದಿನೇ ದಿನೇ ದುರ್ಭರವಾಗುತ್ತಿರುವಾಗ ಇನ್ನೊಂದು ಕಡೆ ನಾಯಕರು ಸುಖವಿಲಾಸಗಅನೀತಿಗಅನಾಚಾರಗಳಲ್ಲಿ ಮುಳುಗೇಳುತ್ತಿರುವುದು ; ಅಂತಹ ನಾಯಕರೇ ತಮಗೆ-ಸ್ವರಾಜ್ಯಕ್ಕಾಗಿ ತ್ಯಾಗ ಮಾಡಬೇಕೆಂದು ಉಪದೇಶಿಸುತ್ತಿರುವುದು ; ಸಹಜವಾಗಿಯೇ ಅಂತಹ ನಾಯಕರೇ ತಮಗೆ-ಸ್ವರಾಜ್ಯಕ್ಕಾಗಿ ತ್ಯಾಗ ಮಾಡಬೇಕೆಂದು ಉಪದೇಶಿಸುತ್ತಿರುವುದು; ಸಹಜವಾಗಿಯೇ ಅಂತಹ ನಾಯಕರ, ಸರಕಾರದ ವಿರುದ್ಧ ತಾವು ಬಂಡಾಯ ಏಳದೆ ವಿಧಿ ಇಲ್ಲ ಎಂದು ಜನಕ್ಕೆ ಅನಿಸುತ್ತಿರುವುದು ; ವಿಧ್ವಂಸಕಾರ್ಯಗಳಲ್ಲಿ ಅವರು ತೊಡಗುವಂತಾಗಿರುವುದು ; ಆಳರಸರು ಜನರ ಈ ಪ್ರತಿಭಟನೆಗಳನ್ನು ಪೋಲೀಸ್ ಮತ್ತು ಸೈನ್ಯ ಶಕ್ತಿಯಿಂದ ಹತ್ತಿಕ್ಕಲು ಯತ್ನಿಸುತ್ತಿರುವುದು ;
– ನಮ್ಮ  ಸ್ವರಾಜ್ಯದ ಈ ಚಿತ್ರದೊಂದಿಗೆ ಶಿವಛತ್ರಪತಿಯು ಅಂದು ಸ್ವರಾಜ್ಯ ಸಂಸ್ಥಾಪನೆಯನ್ನು ಮಾಡಿ ತೋರಿದ ರೀತಿಯನ್ನು ಒಮ್ಮೆ ಕಣ್ಣಮುಂದೆ ತಂಡುಕೊಂಡು ಹೋಲಿಸಿ ನೋಡಿಕೊಳ್ಳುವಾ.  ಆಗ ಇಂದಿನ ನಮ್ಮ ಸ್ವರಾಜ್ಯದ ಅಧೋಗತಿಯ ಕಾರಣಗಳೇನು ಎಂಬುದು ನಿಚ್ಛಳವಾಗಿ ಅರಿವಾದೀತು.  ಅವುಗಳನ್ನು ಪರಿಹರಿಸುವ ಹಾದಿ ಏನು ಎಂಬುದೂ ಸ್ಫುಟವಾದೀತು.  ಆ ಪುನರುತ್ಥಾನದ ಹಾದಿಯಲ್ಲಿ ಹೆಜ್ಜೆ ಹಾಕುವ ಪ್ರೇರಣೆಯೂ ಲಭಿಸೀತು.
ಭವಿಷ್ಯದ ಆಶಾದೀಪ 
ಇದೇ ಆನಂದನಾಮ ಸಂವತ್ಸರದ ಜ್ಯೇಷ್ಠ ಶುದ್ಧ ತ್ರಯೋದಶಿ – 1974, ಜೂನ್ 2ರಂದು – ಆ ಪುಣ್ಯಶ್ಲೋಕ ರಾಷ್ಟ್ರಪುರುಷನು ಸ್ಥಾಪಿಸಿದ ಆದರ್ಶ ಕಹಿಂದವೀ ಸ್ವರಾಜ್ಯದಕ ರಾಜ್ಯಾಭಿಷೇಕದ ಮೂರನೆಯ ಶತಮಾನೋತ್ಸವದ ಮಹಾಮಂಗಲ ಮುಹೂರ್ತ.  ಇಂದಿನ ನಮ್ಮ ಸ್ವರಾಜ್ಯಕ್ಕೆ ಒದಗಿರುವ ಅಮಂಗಲಕರ ಸ್ವರೂಪವನ್ನು ಅಮೂಲಾಗ್ರ ಬದಲಾಯಿಸಿ ಮತ್ತೊಮ್ಮೆ ಆ ಸ್ಪೂರ್ತಿಪ್ರದ ಮಂಗಲ ಸ್ವರೂಪವನ್ನು ನಮ್ಮ ಸ್ವರಾಜ್ಯಕ್ಕೆ ತಂದುಕೊಡುವ ಪ್ರೇರಣೆಯನ್ನು ನಮ್ಮೆಲ್ಲರ ಎದೆಯಲ್ಲಿ ಚಿಮ್ಮಿಸಬಲ್ಲ ಮಹಾಪ್ರೇರಣಾಮಯ ಮುಹೂರ್ತ ಇದೇ !
ಏಕೆಂದರೆ ಆಧುನಿಕ ಭಾರತದ ಪುನರ್ಜಾಗರಣದ ಪಾಂಚಜನ್ಯ ಮೊಳಗಿಸಿದ ಸಿಂಹ ಸಂನ್ಯಾಸಿ ಸ್ವಾಮಿ ವಿವೇಕಾನಂದರು ಯಾರ ಕುರಿತಾಗಿ ಈ ರೀತಿ ಭಾವೋತ್ಕಟರಾಗಿ ನುಡಿದರೋ ಯಾವ ಕಾಲದಲ್ಲಿ ನಮ್ಮ ಧರ್ಮ ಸಂಸ್ಕೃತಿಗಳು ಹೇಳಹೆಸರಿಲ್ಲದಂತೆ ತೊಡೆದು ಹೋಗುತ್ತಿದ್ದವೋ, ನಮ್ಮ ಜನಾಂಗಕ್ಕೆ ಜನಾಂಗವೇ ವಿನಾಶದ ಮಡುವಿನಲ್ಲಿ ಮುಳುಗಿ ಹೋಗುತ್ತಿದ್ದಿತೋ ಅಂಥ ವಿಷಗಳಿಗೆಯಲ್ಲಿ ನಮ್ಮ ಧರ್ಮವನ್ನೂ ಸಮಾಜವನ್ನೂ ಉದ್ಧಾರ ಮಾಡಿದ ಮಹಾನ್ ರಾಷ್ಟ್ರಪುರುಷ ಆತ.  ಅಧರ್ಮವನ್ನಳಿಸಿ ಧರ್ಮರಾಜ್ಯ ಸ್ಥಾಪಿಸಿದ ಯುಗುಪುರುಷ ಆತ.  ನಮ್ಮೆಲ್ಲ ಪ್ರಾಚೀನ ಮಹಾಕಾವ್ಯಗಳಲ್ಲಿ, ಶಾಸ್ತ್ರಗಳಲ್ಲಿ ಬಣ್ಣಿಸಲಾದ ಅಭಿಜಾತ ನಾಯಕನ ಸರ್ವಸದ್ಗುಣಗಳ ಸಜೀವ ಆಕಾರ ! ಅವನಷ್ಟು ಶ್ರೇಷ್ಠನಾದ ಶೂರ, ಸತ್ಪುರುಷ, ಭಗವದ್ಭಕ್ತ ರಾಜಇನ್ನೊಬ್ಬನುಂಟೇ? ಭಾರತದ ಆತ್ಮಚೇತನದ ಮೂರ್ತರೂಪವೇ ಅವನು. “ ಭಾರತ ಭವಿಷ್ಯದ ಆಶಾದೀಪ ಅವನು ! “
 ಅಂತಹ ಉಜ್ವಲ ರಾಷ್ಟ್ರೀಯ ಆಶಾದೀಪವು ತನ್ನ ಪೂರ್ಣ ತೇಜಸ್ಸಿನಿಂದ ಕಂಗೊಳಿಸುವ ದಿವ್ಯ ಮುಹೂರ್ತ ಇದು !

Comments

Popular Posts

LOVE ಫೇಲ್​​ ಆದವರಿಗೆ ಮಾತ್ರ....

ಬ್ರೇಕ್ ಅಪ್ ಆಯ್ತಾ?? ಹಾಗಾದ್ರೆ ಇಲ್ಲಿ ನೋಡಿ