ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜೀವನದ ಮಹಾಸಾಧನೆ
loading... ಇಂದಿಗೊಂದು ಕೈದೀವಿಗೆ – ಆ ಅಮರಗಾಥೆ ! ಛ ತ್ರಪತಿ ಶ್ರೀ ಶಿವಾಜಿ ಮಹಾರಾಜರ ಜೀವನದ ಮಹಾಸಾಧನೆಯನ್ನು ಸಾರವತ್ತಾಗಿ ಕಣ್ಣಿಗೆ ಕಟ್ಟಿಸಬಲ್ಲ ಒಂದು ಶಬ್ದ ಇದೆ: ‘ ಸ್ವರಾಜ್ಯ ಸಂಸ್ಥಾಪನೆ ! ‘ ಸ್ವರಾಜ್ಯ ಸಂಸ್ಥಾಪಕ ‘ – ಇದೇ ಶ್ರೀ ಶಿವಛತ್ರಪತಿಗೆ ಒಪ್ಪುವ ಎಲ್ಲಕ್ಕಿಂತ ಯಥಾರ್ಥವಾದ ಬಿರುದು. ಇಲ್ಲಿ ‘ಸ್ವರಾಜ್ಯ’ ಎನ್ನುವ 20 ನೆಯ ಶತಮಾನದ ಶಬ್ದವನ್ನು 17ನೆಯ ಶತಮಾನದ ಒಬ್ಬ ರಾಜನಿಗೆ ಅನ್ವಯಿಸುವುದು ಎಷ್ಟರ ಮಟ್ಟಿಗೆ ಸರಿ ? ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುವೆನು’ ಎಂದು ಗರ್ಜಿಸಿದ ಲೋಕಮಾನ್ಯ ತಿಲಕರಿಂದಾಗಿ ಆಧುನಿಕ ಕಾಲದಲ್ಲಿ ಪ್ರಚಲಿತವಾದ ಶಬ್ದ ಅದಲ್ಲವೇ ? ಎಂದು ಯಾರಾದರೂ ಆಕ್ಷೇಪ ಎತ್ತಬಹುದು. ಸ್ವರಾಜ್ಯ ಮಂತ್ರದ ದ್ರಷ್ಟಾರ ಆದರೆ ವಾಸ್ತವಿಕ ಸಂಗತಿ ಎಂದರೆ ‘ಸ್ವರಾಜ್ಯ’ ಶಬ್ದವನ್ನು ಬಹುಶಃ ಮೊಟ್ಟಮೊದಲಿಗೆ ಪ್ರಯೋಗ ಮಾಡಿದವರೇ ಶಿವಾಜಿ ಮಹಾರಾಜರು. ಅದೂ ಸಹ ತಮ್ಮ ಕೇವಲ 16 ನೆಯ ವರ್ಷದ ಎಳೆವಯಸ್ಸಿನಲ್ಲಿ. ತಮ್ಮ ಕಿಶೋರ ಸಂಗಡಿಗ ದಾದಾಜಿ ನರಸ ಪ್ರಭುವಿಗೆ ಶಿವಛತ್ರಪತಿಯು ಬರೆದ ಪತ್ರದಲ್ಲಿ ಅದರ ಸ್ಪಷ್ಟ ಉಲ್ಲೇಖವಿದೆ. ಆ ಚರಿತ್ರಾರ್ಹ ಪತ್ರದ, ಸಂದರ್ಭ ಹೀಗಿದೆ . ಮಾವಳ ಪ್ರಾಂತದ ಕೆಲವು ಜಹಗೀರುದಾರರು ತನಗೆ ಸಲ್ಲುತ್ತಿದ್ದ ಕಂದಾಯವನ್ನು ನಿಲ್ಲಿಸಿ, ‘ಬಂಡಖೋರ’ ಬಾಲಕ ಶಿವಾಜಿಗೆ...